ಕುವೈಟ್ ನಿಂದ ಮಂಗಳೂರಿಗೆ ಕನ್ನಡಿಗರ ಮೊದಲ ಚಾರ್ಟರ್ ವಿಮಾನ ಹಾರಾಟ ಯಶಸ್ವಿ
ಕುವೈಟ್ ನ ಕರ್ನಾಟಕ ಸಂಘಗಳು ಒಂದುಗೂಡಿ ಅಕ್ಬರ್ ಟ್ರಾವೆಲ್ಸ್ ನ ಸಹಯೋಗದೊಂದಿಗೆ ಕೋವಿಡ್-19 ಮಹಾಮಾರಿಗೆ ಸಿಲುಕಿ ಸಂಕಷ್ಟಕ್ಕೆ ಒಳಗೊಂಡ ಕುವೈಟ್ ಕನ್ನಡಿಗರನ್ನು ತಮ್ಮ ಮಾತೃಭೂಮಿಗೆ ತಲುಪಿಸುವ ಸಲುವಾಗಿ ದಿನಾಂಕ 17-06-2020 ಬುಧವಾರದಂದು ಜಜೀರಾ ಖಾಸಗಿ ವಿಮಾನವು ಯಶಸ್ವಿಯಾಗಿ ಹಾರಾಟ ನಡೆಸಿತು.ಎಲ್ಲಾ ಸಂಘದ ಮುಖಂಡರು ಮತ್ತು ಅಕ್ಬರ್ ಟ್ರಾವೆಲ್ಸ್ ತಂಡವು ಎಲ್ಲಾ ಪ್ರಯಾಣಿಕರಿಗೆ ಸುರಕ್ಷಿತವಾಗಿ ತಲುಪಿ ಎಂದು ಶುಭ ಹಾರೈಸಿದರು.
ಹಿರಿಯ ನಾಗರಿಕರು ,ಗರ್ಭಿಣಿ ಸ್ತ್ರೀಯರು , ಅವಧಿ ಮುಗಿದ ಭೇಟಿ ವೀಸಾ ಹೊಂದಿದವರು, ಕೆಲಸ ಕಳೆದುಕೊಂಡವರು ಹೀಗೆ ತಾಯಿ ನಾಡಿಗೆ ಬರಲಾಗದೆ ಕೋವಿಡ್ 19 ನಿಂದ ಸಮಸ್ಯೆ ಅನುಭವಿಸುತ್ತಿದ್ದ ಒಟ್ಟಾರೆ 165 ಪ್ರಯಾಣಿಕರನ್ನು ಒಳಗೊಂಡ ಖಾಸಗಿ ವಿಮಾನವು ಸುರಕ್ಷಿತವಾಗಿ ಮಂಗಳೂರು ವಿಮಾನ ನಿಲ್ದಾಣವನ್ನು ತಲುಪಿತು. ಈ ಯಶಸ್ವಿ ಕಾರ್ಯವನ್ನು ಕಾರ್ಯಗತ ಗೊಳಿಸುವಲ್ಲಿ ಭಾರತ ಸರ್ಕಾರ ,ಕರ್ನಾಟಕ ರಾಜ್ಯ ಸರ್ಕಾರ, ಕುವೈಟ್ ಸರ್ಕಾರ ,ಭಾರತೀಯ ರಾಯಭಾರಿ ಕಚೇರಿ ಕುವೈಟ್ ,ಜಿಲ್ಲಾಧಿಕಾರಿಗಳ ಕಚೇರಿ ಮಂಗಳೂರು ಮತ್ತು ಜಜೀರಾ ಏರ್ವೇಸ್ ನ ಇಡೀ ತಂಡದ ಬೆಂಬಲ ಮತ್ತು ಸಹಕಾರ ಶ್ಲಾಘನೀಯ ಮತ್ತು ಈ ಕಾರ್ಯಕ್ಕೆ ಶ್ರಮಿಸಿದ ಎಲ್ಲ ಕುವೈಟ್ ಕರ್ನಾಟಕ ಸಂಘಗಳ ಶ್ರಮ ಪ್ರಶಂಸನೀಯ.
ಭಾರತ ಸರ್ಕಾರವು ವಂದೇ ಭಾರತ್ ಮಿಷನ್ ಘೋಷಿಸಿದ ಸಮಯದಿಂದ ಎಲ್ಲ ಕುವೈಟ್ ಕರ್ನಾಟಕ ಸಂಘಗಳು ‘ಯುನೈಟೆಡ್ ಕರ್ನಾಟಕ ಅಸೋಸಿಯೇಷನ್ಸ್ ಆಫ್ ಕುವೈಟ್ ’ ಬ್ಯಾನರ್ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಸಾಧ್ಯವಿರುವ ಎಲ್ಲ ಸಂಪರ್ಕಗಳನ್ನು ಸಂಪರ್ಕಸಿದ್ದು ತೊಂದರೆಗೀಡಾದ ಕುವೈಟ್ ಕನ್ನಡಿಗರನ್ನು ಹಿಂತಿರುಗಿಸಲು ವಿನಂತಿಸಿದ್ದರು.ಅವರಲ್ಲಿ ಹಲವರ ವೈದ್ಯಕೀಯ ಸ್ಥಿತಿ ಗಂಭೀರವಾಗಿದ್ದು , ಕೆಲವರು ಉದ್ಯೋಗ ಕಳೆದುಕೊಂಡಿದ್ದರು ಮತ್ತು ಕಳೆದ 3-4 ತಿಂಗಳುಗಳಿಂದ ವೇತನ ಯಾವುದೇ ಇಲ್ಲದೆ ಸಮಸ್ಯೆಯಲ್ಲಿದ್ದವರು ಮತ್ತು ಕೆಲವು ಗರ್ಭಿಣಿಯರು ಇದ್ದರು.
ತಾಯಿ ನಾಡಿಗೆ ಹಿಂತಿರುಗುವ ಕಾಯುವಿಕೆಯಲ್ಲಿ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಕೆಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಮ್ಮ ಕಣ್ಣುಗಳ ಮುಂದೆ,ಎಲ್ಲಾ ಕಷ್ಟಗಳನ್ನು ಎದುರಿಸುತ್ತಿದ್ದ ನಮ್ಮ ಕನ್ನಡಿಗರನ್ನು ತಾಯ್ನಾಡಿಗೆ ಹಿಂತಿರುಗಿಸುವ ಭರವಸೆಯೊಂದಿಗೆ ನಾವು ದಣಿವರಿಯಿಲ್ಲದೆ ಕೆಲಸ ಮಾಡಿದ್ದೇವೆ ಮತ್ತು ಸುರಕ್ಷಿತವಾಗಿ ಮನೆಗೆ ಹಿಂತಿರುಗಿಸಿದ್ದೇವೆ . ಕನ್ನಡಿಗರ ಕಷ್ಟಗಳನ್ನು ಸರಾಗಗೊಳಿಸುವ ಪ್ರಯತ್ನಗಳನ್ನು ನಾವು ಮುಂದುವರಿಸುತ್ತೇವೆ.
ತಮ್ಮ ಪೂರ್ಣ ಪ್ರಮಾಣದ ಸಹಕಾರ ನೀಡಿದ ಅಕ್ಬರ್ ಟ್ರಾವೆಲ್ಸ್ ನ ಪ್ರಾದೇಶಿಕ ವ್ಯವಸ್ಥಾಪಕರಾದ ಶ್ರೀ ಶೇಖ್ ಅಬ್ದುಲ್ಲಾ ಅವರಿಗೆ ನಮ್ಮ ಪ್ರಾಮಾಣಿಕ ಕೃತಜ್ಞತೆ ಸಲ್ಲಿಸುತ್ತೇವೆ ಮತ್ತು ಪ್ರಮುಖವಾಗಿ ಈ ಯಶಸ್ವಿ ಕಾರ್ಯದ ನಾಯಕತ್ವ ಹೊತ್ತ ತುಳುಕೂಟ ಕುವೈಟ್ ನ ಗೌರವಾನ್ವಿತ ಅಧ್ಯಕ್ಷರಾದ ಶ್ರೀ ರಮೇಶ್ ಎಸ ಭಂಡಾರಿ ಯವರ ಶ್ರಮ ಶ್ಲಾಘನೀಯ ಅವರಿಗೆ ವಿಶೇಷ ಧನ್ಯವಾದಗಳನ್ನು ವ್ಯಕ್ತಪಡಿಸಲು ನಾವು ಬಯಸುತ್ತೇವೆ. ಶ್ರೀ ಸ್ಟೀವನ್ ರೆಗೊ (KCWA), ಶ್ರೀ ರಾಜೇಶ್ ವಿಟ್ಟಲ್
(ಕನ್ನಡ ಕೂಟ), ಶ್ರೀ ಗುರುಪ್ರಸಾದ್ ಹೆಗ್ಡೆ (BSK ) ಮತ್ತು ಜಜೀರಾ ಏರ್ವೇಸ್ ನ ಮುಖ್ಯಸ್ಥರು ಹಾಗು ಶ್ರೀಮತಿ ಸಿಂಧು ರೂಪೇಶ್ - ಡಿಸಿ ಮಂಗಳೂರು, ಡಿಸಿ ಕಚೇರಿಯಿಂದ ಡಾ.ಯತೀಶ್ ಉಲ್ಲಾಲ್ ಮತ್ತು ಮಂಗಳೂರಿನ ಕ್ಯಾರೆಂಟೈನ್ ವಿಭಾಗದ ಶ್ರೀ ಮನೀಶ್ ರವರ ಅತ್ಯುತ್ತಮ ಬೆಂಬಲಕ್ಕಾಗಿ ಕೃತಜ್ಞತೆ ಸಲ್ಲಿಸುತ್ತೇವೆ.
ಶ್ರೀ ಎಸ್. ಎಂ. ಅಜರ್ (KKMA ), ಶ್ರೀ ಕೃಷ್ಣ ಪೂಜಾರಿ (ಬಿಲ್ಲವ್ ಸಂಗ),ಶ್ರೀ ಅಬ್ದುಲ್ ನಾಸರ್ ಖಾನ್ (KMWA ), ಶ್ರೀ ಜಾಫರ್ ಸಾದಿಕ್ (IMA ), ಶ್ರೀ ರಾಜ್ ಭಂಡರಿ (BPP ),ಶ್ರೀ ರಾಜೇಶ್ ಮೆಂಡನ್ (MAK ), ಡಾ.ಸುರೇಂದ್ರ ನಾಯಕ್ (GSB) ಅವರ ಪ್ರತ್ಯಕ್ಷ ಮತ್ತು ಪರೋಕ್ಷ ಬೆಂಬಲಕ್ಕಾಗಿ ಧನ್ಯವಾದ ಅರ್ಪಿಸುತ್ತೇವೆ.
|