ತುಳುಕೂಟ ಕುವೈಟ್ ರಕ್ತದಾನ ಶಿಬಿರ -೨೦೨೦
ಈ ಕೋವಿಡ್ ನ ಸಂಕಷ್ಟದ ಸಮಯದಲ್ಲಿ ,ತುಳುಕೂಟ ಕುವೈಟ್ ನ ರಕ್ತದಾನ ಕಾರ್ಯಕ್ರಮ ಹೊಸ ಇತಿಹಾಸ ಸೃಷ್ಟಿಸಿದೆ ಎಂದು ಬಹಳ ಹೆಮ್ಮೆಯಿಂದ ಮತ್ತ್ತು ತೃಪ್ತಿಯಿಂದ ಹೇಳ ಬಯಸುತ್ತೇವೆ .
ಮೊದಲಿಗೆ ತುಳುಕೂಟ ಕುವೈಟ್ ನ ಅಧ್ಯಕ್ಷರಾದ ಶ್ರೀ ರಮೇಶ್ ಎಸ್ ಭಂಡಾರಿ ತಮ್ಮ ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ತುಳುಕೂಟ ಸಮಿತಿ ಸದಸ್ಯರು ಮತ್ತು ವಿಶೇಷವಾಗಿ ಎಲ್ಲಾ ವಯಸ್ಸಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಮಹಾನ್ ಕಾರ್ಯಕ್ರಮವನ್ನು ಬೆಂಬಲಿಸಿದರು ಮತ್ತು ಅವರ ಅಮೂಲ್ಯವಾದ ರಕ್ತವನ್ನು ದಾನ ಮಾಡುವ ಮೂಲಕ ತಮ್ಮ ಕೈಗಳನ್ನು ಈ ಅದ್ಬುತ ಕಾರ್ಯಕ್ಕೆ ಜೋಡಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಒಟ್ಟು 90 ಕ್ಕೂ ಅಧಿಕ ಜನರು ರಕ್ತದಾನಕ್ಕಾಗಿ ಬಂದರು, ಇದರಲ್ಲಿ 83 ಜನ ರಕ್ತದಾನ ಮಾಡಿದರು. ಎಲ್ಲರ ಬೆಂಬಲದೊಂದಿಗೆ ತುಳುಕೂಟ ಕುವೈಟ್ ಈ ಅದ್ಬುತ ಕಾರ್ಯವನ್ನು ಮಾಡಿದೆ .
ಕಾರ್ಯಕ್ರಮದಲ್ಲಿ ಮಾತನಾಡಿದ ತುಳುಕೂಟ ಕುವೈಟ್ ನ ಅಧ್ಯಕ್ಷರು ,ಈ ಕೋವಿಡ್ ಸಮಯದಲ್ಲಿ ಬಹಳಷ್ಷ್ಟು ಉತ್ತಮ ಕೆಲಸಗಳನ್ನು ತುಳುಕೂಟ ಕುವೈಟ್ ಮಾಡಿದೆ ಹಾಗು ರಕ್ತದ ಅಂತ್ಯತ ಅವಶ್ಯ ಸಮಯ ಇದಾಗಿದ್ದು ಈ ನಿಟ್ಟಿನಲ್ಲಿ ರಕ್ತದಾನ ಕಾರ್ಯಕ್ರಮವನ್ನು ಏರ್ಪಡಿಸಿದೆ ಎಂದು ಹೇಳಿದರು ಮತ್ತು ಈ ಕಾರ್ಯಕ್ರಮಕ್ಕೆ ಕೊರೊನ ಭೀತಿಯ ನಡುವೆಯೂ ಸಹ ಎಲ್ಲರು ಬಂದು ಸಹಕರಿಸಿ ರಕ್ತದಾನ ಮಾಡಿ ರಕ್ತದಾನ ಶ್ರೇಷ್ಠ ದಾನವೆಂದು ತೋರಿಸಿಕೊಟ್ಟ ಎಲ್ಲ ದಾನಿಗಳಿಗೆ ಕೃತಜ್ಞತೆ ಹೇಳಿದರು.
ಈ ಕಠಿಣ ಕೋವಿಡ್ ಸಮಯದಲ್ಲಿ ತುಳುಕೂಟ ಕುವೈಟ್
ಒಟ್ಟಾಗಿ ಬಹಳ ಉತ್ಸಾಹದಿಂದ ಈ ಕಾರ್ಯವನ್ನು ಮಾಡಿದ್ದು,ಈ ಮಹತ್ತರ ಸಾಧನೆಯಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ತೊಡಗಿಸಿಕೊಂಡ ಎಲ್ಲರಿಗೂ ತುಂಬುಹೃದಯದ ಅಭಿನಂದನೆಗಳು.
ವಿಶೇಷವಾಗಿ ದಾನಿಗಳಿಗೆ ಫಲಹಾರ ಕಿಟ್ ಪ್ರಾಯೋಜಿಸಿದ್ದಕ್ಕಾಗಿ ಬದರ್ ಅಲ್ ಸಮಾ ಕ್ಲಿನಿಕ್ ಗೆ
ಮತ್ತು ವಿಶೇಷ ಬೆಂಬಲಕ್ಕಾಗಿ ಸಲಹೆಗಾರ ವಿಲ್ಸನ್ ಡಿಸೋಜಾ ರವರಿಗೆ ಹಾಗು ನಮ್ಮ ರಕ್ತದಾನ ಕಾರ್ಯಕ್ರಮವನ್ನು ಸುಗಮವಾಗಿ ನಡೆಯಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಜಾಬ್ರಿಯಾ ಬ್ಲಡ್ ಬ್ಯಾಂಕ್ ವೈದ್ಯಕೀಯ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ತುಂಬು ಹೃದಯದ ಧನ್ಯವಾದಗಳು.
ಎಲ್ಲ ರೀತಿಯ ಸಹಕಾರಕ್ಕಾಗಿ ಕೂಟದ ವೆಲ್ಫೇರ್ ಅಧಿಕಾರಿಗೆ ಮತ್ತು ಸಹಕರಿಸಿದ ಎಲ್ಲ ಆಡಳಿತ ಸಮಿತಿ ಸದಸ್ಯರಿಗೆ ಧನ್ಯವಾದಗಳು.
ಮುಖ್ಯವಾಗಿ ಈ ಕಾರ್ಯಕ್ರಮದ ಮುಂದಾಳತ್ವ ವಹಿಸಿದ ತುಳುಕೂಟ ಕುವೈಟ್ ನ ಗೌರವಾನ್ವಿತ ಅಧ್ಯಕ್ಷರಾದ ಶ್ರೀ ರಮೇಶ್ ಎಸ್ ಭಂಡಾರಿ ಇವರಿಗೆ ಅಭಿನಂದನೆಗಳು.
ಒಟ್ಟಾರೆಯಾಗಿ ಇದು ತಂಡದ ಕೆಲಸವಾಗಿದ್ದು, ಕಾರ್ಯಕ್ರಮದ ನಂತರ ಪ್ರತಿಯೊಬ್ಬರ ಮುಖದಲ್ಲೂ ಯಶಸ್ಸು ಮತ್ತು ತೃಪ್ತಿಯ ನಗುವನ್ನು ತಂದಿತು.
|