Menu
News Details

Gulf Karnataka leaders had video meeting on 28th May 2020 with MP Shri Nalin Kumar Kateel

Gulf Karnataka leaders had video meeting on 28th May 2020 with MP Shri Nalin Kumar Kateel with an appeal to introduce and increase more flights to Bangalore and Mangalore from Gulf Countries. Sarvotham Shetty(President Abudhabi Karnataka Sangha),

As it is a serious concern that there have been very few flights to Karnataka from the gulf Countries under Vande Mathram plan ,leaders from the gulf countries held zoom video meeting the Honorable MP Shri.Nalin Kumar Kateel. Ravi Shetty coordinated and introduced . Sarvotham Shetty welcomed the MP .

All have appealed to the MP that many expatriate community members SUCH elderly parents, pregnant women, patients and those who have lost jobs are desperately waiting to travel back to home in Karnataka . MP spoke in depth and assured all the necessary help though they too have serious issues locally. He stated that flights already scheduled from gulf counties to main Indian States and also said that connecting flight to other domestic destinations shall be arranged .He mentioned that so far MEA used handle the flights under Vande Mataram plan , but now onwards Aviation Ministry will take over.He said that he all already spoke to State Govt and MEA and insisted to speed up the process of arranging flights to Karnataka from all Gulf Counties.With regard to granting permission to private chartered flight , he said they are already in the process of arranging the permission.He also expressed the concern on quarantine facilities as huge numbers of people from neighboring states coming to our state. He said that local administration cares and wants distressed Nri Kannadigas to return home He also mentioned they stopped issuing passes for other states due to the shortage of quarantine facilities as so far 5250 people are in quarantine facilities. He also mentioned that they have relaxed the institutional quarantine requirement to 7 days and rest will be home quarantine. Out of 7 days too once the report comes negative passengers can go home. He also mentioned that after few days they are also thinking of introducing home quarantine.

From UAE Sarvotham Shetty -Karnataka Sangha President ,M.E.Moolur -GS,Barrys Associations GS,Praveen Shetty-President-KNRI ,From Oman Shashidhar Shetty - Entroprenure and Community Leader ,Karunakar Rao-President -Karnataka Sangha Oman,From Qatar Nagesh Rao-President Karnataka Sangha Qatar,Ravi Shetty-Entroprenure and Community Leader , From Kuwait Ramesh Bhandary- President ,Tulu Koota Kuwait, Rajesh Vittal-President -Kannada Koota ,From Saudi Arabia- Zakaria Bajpe,President-Sau Humanity Forum-KSA,Santhosh Shetty -President KNRI Riyadh , From Bahrain Pradeep Shetty-President Kannada Sangha,Mohammed Mansoor President Indian overseas Congress ,Avikshith Rai were present .All the leaders thanked the the MP and again emphathised the concern and appeealed for the solution soon.

Ravi Shetty from Qatar coordinated the meeting.

ಗಲ್ಫ್ ಕನ್ನಡಿಗರ ಸಂಘಟನೆಗಳ ಪ್ರಮುಖರು ಶ್ರೀ ನಳಿನ್ ಕುಮಾರ್ ಕಟೀಲ್ ಇವರೊಂದಿಗೆ ಪ್ರಸ್ತುತ ಗಲ್ಫ್ ರಾಷ್ಟ್ರಗಳಲ್ಲಿ ಕನ್ನಡಿಗರು ಕೋವಿಡ್-19 ನಿಂದಾಗಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹಾಗು ಸ್ವದೇಶಕ್ಕೆ ಹಿಂತಿರುಗಲು ಗಲ್ಫ್ ರಾಷ್ಟ್ರಗಳಿಂದ ಕರ್ನಾಟಕಕ್ಕೆ ವಿಮಾನಯಾನ ವನ್ನು ಒದಗಿಸುವಂತೆ ವಿಡಿಯೋ ಸಂವಾದದಲ್ಲಿ ಚರ್ಚಿಸಿದರು. ಡಾ.ಎಂ ರವಿ ಶೆಟ್ಟಿ ಉದ್ಯಮಿ,ಕರ್ನಾಟಕ ಸಂಘ ಕತಾರ್ ನ ಮಾಜಿ ಉಪಾಧ್ಯಕ್ಷರು , ತುಳುಕೂಟ ಹಾಗು ಭಂಟರ ಸಂಘ ಕತಾರ್ ನ ಮಾಜಿ ಅಧ್ಯಕ್ಷರಾದ ಶ್ರೀಯುತರು ಈ ವಿಡಿಯೋ ಸಂವಾದವನ್ನು ಆಯೋಜಿಸಿದ್ದು , ಕುವೈಟ್ ನಿಂದ ತುಳುಕೂಟ ಕುವೈಟ್ ನ ಗೌರವಾನ್ವಿತ ಅಧ್ಯಕ್ಷರಾದ ಶ್ರೀ ರಮೇಶ್ ಎಸ್ ಭಂಡಾರಿ ಮತ್ತು ಕನ್ನಡ ಕೂಟ ಕುವೈಟ್ ನ ಗೌರವಾನ್ವಿತ ಅಧ್ಯಕ್ಷರಾದ ಶ್ರೀ ರಾಜೇಶ್ ವಿಠ್ಠಲ್ ಈ ಚರ್ಚೆಯಲ್ಲಿ ಪಾಲ್ಗೊಂಡಿದ್ದರು ಹಾಗು ಇತರ ಗಲ್ಫ್ ರಾಷ್ಟ್ರಗಳ ಕನ್ನಡ ಸಂಘಟನೆಗಳ ಮುಖ್ಯಸ್ಥರಾದ ಶ್ರೀ ಸರ್ವೋತಮ ಶೆಟ್ಟಿ (ಅಧ್ಯಕ್ಷರು ಕರ್ನಾಟಕ ಸಂಘ ,UAE ), ಎಂ .ಇ ಮೂಲೂರ್ (GS, ಬ್ಯಾರಿ ಆಸ್ಸೊಸಿಯೆಷನ್) , ಶ್ರೀ ಪ್ರವೀಣ್ ಶೆಟ್ಟಿ (ಅಧ್ಯಕ್ಷರು ,KNRI) , ಶ್ರೀ ಶಶಿಧರ್ ಶೆಟ್ಟಿ (ಉದ್ಯಮಿ , Oman), ಶ್ರೀ ಕರುಣಾಕರ್ ರಾವ್ (ಅಧ್ಯಕ್ಷರು , ಕರ್ನಾಟಕ ಸಂಘ ,OMAN) ಶ್ರೀ ನಾಗೇಶ್ ರಾವ್ (ಅಧ್ಯಕ್ಷರು, ಕರ್ನಾಟಕ ಸಂಘ ,QATAR) ,ಶ್ರೀ ಜಕಾರಿಯಾ ಬಜ್ಪೆ (ಅಧ್ಯಕ್ಷರು , Sau Humanity Forum-KSA ) ಶ್ರೀ ಸಂತೋಷ ಶೆಟ್ಟಿ (ಅಧ್ಯಕ್ಷರು ,KNRI Riyadh) ಶ್ರೀ ಪ್ರದೀಪ್ ಶೆಟ್ಟಿ (ಅಧ್ಯಕ್ಷರು , ಕನ್ನಡ ಸಂಘ Bahrain) ,ಶ್ರೀ ಮೊಹಮ್ಮದ್ ಮನ್ಸೂರ್ ( ಅಧ್ಯಕ್ಷರು ,Indian overseas Congress ) ಮತ್ತು ಶ್ರೀ ಅವೀಕ್ಷಿತ್ ರೈ ಸಹ ಈ ಚರ್ಚೆಯಲ್ಲಿ ಭಾಗವಹಿಸಿದ್ದರು .

ಪ್ರತಿ ರಾಜ್ಯಕ್ಕೂ ವಿಮಾನದ ವ್ಯವಸ್ಥೆ ಕಲ್ಪಿಸಿಕೊಡಲಾಗಿದ್ದು ಕರ್ನಾಟಕಕ್ಕೆ ಮಾತ್ರ ಇದುವರೆಗೂ ದುಬೈ ನಿಂದ 2 ವಿಮಾನಗಳ ವ್ಯವಸ್ಥೆಯಾಗಿದ್ದು ,ಇತರೆ ಗಲ್ಫ್ ರಾಷ್ಟ್ರಗಳಾದ ಕುವೈಟ್, ಕತಾರ್ ,ಬಹರೈನ್ ,ಸೌದಿ ಅರೇಬಿಯ ಇಲ್ಲಿಂದ ಇದುವರೆಗೂ ಒಂದು ಸಹ ವಿಮಾನದ ವ್ಯವಸ್ಥೆ ಆಗಿರುವುದಿಲ್ಲ ಮತ್ತು ಹಲವಾರು ಕನ್ನಡಿಗರು ಸ್ವದೇಶಕ್ಕೆ ಮರಳಲು ಈಗಾಗಲೇ ಭಾರತೀಯ ರಾಯಭಾರ ಕಚೇರಿಯಡಿಯಲ್ಲಿ ನೊಂದಣಿ ಮಾಡಿದ್ದಾರೆ ಹಾಗು ಈ ವಿಷಯದ ಬಗ್ಗೆ ಈಗಾಗಲೇ , ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಯಡಿಯೂರಪ್ಪನವರ ಜೊತೆ, ಸನ್ಮಾನ್ಯ ಶ್ರೀ ಸದಾನಂದ ಗೌಡರ ಜೊತೆ ಹಾಗು ಇನ್ನಿತರ ಸಂಬಂಧಪಟ್ಟ ಗಣ್ಯರೊಡನೆ ಚರ್ಚಿಸಲಾಗಿದೆ ಮತ್ತು ಎಲ್ಲರು ನಮ್ಮ ಮನವಿಯನ್ನು ಸ್ವೀಕರಿಸಿ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೂ ಸಹ ವಿಮಾನ ವ್ಯವಸ್ಥೆಯನ್ನು ಕಲ್ಪಿಸಲಾಗಿಲ್ಲ ಎಂದು ಸಂಘಟನೆಯ ಮುಖ್ಯಸ್ಥರು ಬೇಸರ ವ್ಯಕ್ತ ಪಡಿಸಿದರು .

ಸರ್ಕಾರದ ವತಿಯಿಂದ ವಿಮಾನ ವ್ಯವಸ್ಥೆ ಮಾಡುವುದಕ್ಕೆ ಏನಾದರು ಅಡಚಣೆಗಳಿದ್ದರೆ ,ಇತರೆ ಖಾಸಗಿ ಸಂಸ್ಥೆಗಳು ತಮ್ಮ ವಿಮಾನ ಸೇವೆಯನ್ನು ನೀಡುವುದಾಗಿ ಹೇಳಿದ್ದಾರೆ ಆದರೆ ಅವರಿಗೆ ಭಾರತ ಸರ್ಕಾರದಿಂದ ಅನುಮತಿ ಬೇಕಾಗಿದೆ ದಯವಿಟ್ಟು ಅವರಿಗೆ ಅನುಮತಿ ಕೊಡಬೇಕಾಗಿ ವಿನಂತಿಸಿಕೊಂಡರು .

ಎಲ್ಲರ ಮನವಿಯನ್ನು ಆಲಿಸಿದ ಸನ್ಮಾನ್ಯ ಶ್ರೀ ನಳಿನ್ ಕುಮಾರ್ ಕಟೀಲ್ ಇವರು ಎಲ್ಲ ವಿಷಯಗಳನ್ನು ಸರ್ಕಾರದೊಂದಿಗೆ ಚರ್ಚಿಸಿ ವಿಮಾನದ ವ್ಯವಸ್ಥೆ ಮಾಡುವುದಾಗಿ ಹೇಳಿದರು ಮತ್ತು ಈ ಕೆಳಗಿನ ವಿಷಯಗಳನ್ನು ಪ್ರಮುಖರ ಗಮನಕ್ಕೆ ತಂದರು.

೧. ಈಗಾಗಲೇ ಗಲ್ಫ್ ರಾಷ್ಟ್ರಗಳಿಂದ ಭಾರತದ ಹಲವು ರಾಜ್ಯಗಳಿಗೆ ಅಂತಾರಾಷ್ಟ್ರೀಯ ವಿಮಾನ ವ್ಯವಸ್ಥೆ ಮಾಡಲಾಗಿದೆ ಮತ್ತು ನಿಗದಿತ ವಿಮಾನ ನಿಲ್ದಾಣದಿಂದ ತಮ್ಮ ಊರಿಗೆ ತಲುಪಲು ದೇಶಿಯ ವಿಮಾನಗಳ ಹಾರಾಟವನ್ನು ಆರಂಭಿಸಲಾಗಿದೆ .

೨.ಇದುವರೆಗೂ MEA ಈ ವಿಶೇಷ ವಿಮಾನಯಾನದ ಜವಾಬ್ದಾರಿಯನ್ನು ಹೊಂದಿತ್ತು ಆದರೆ ಇನ್ನು ಮುಂದೆ Aviation ministry ಈ ಜವಾಬ್ದಾರಿಯನ್ನು ಹೊತ್ತುಕೊಂಡು ಕಾರ್ಯಗತ ಮಾಡುತ್ತದೆ ಎಂದು ತಿಳಿಸಿದರು.

೩.ಈಗಾಗಲೇ MEA ಮತ್ತು ರಾಜ್ಯ ಸರ್ಕಾರದೊಂದಿಗೆ ಈ ವಿಷಯವನ್ನು ಚರ್ಚಿಸಿದ್ದು ಅತ್ಯಂತ ತ್ವರಿತವಾಗಿ ಪ್ರಕ್ರಿಯೆ ಯನ್ನು ಮಾಡಲು ಕೇಳಿಕೊಂಡಿರುವುದಾಗಿ ಹೇಳಿದರು .

೪.ಖಾಸಗಿ ವಿಮಾನಗಳಿಗೆ ಅನುಮತಿ ಕೊಡಲು ಈಗಾಗಲೇ ಪ್ರಕ್ರಿಯೆ ನಡೆಯುತ್ತಿರುವುದಾಗಿ ಹೇಳಿದರು .

೫.ಪರ ರಾಜ್ಯಗಳಿಂದ ಹಲವಾರು ಜನ ಬರುತ್ತಿದ್ದು ಕ್ವಾರಂಟೈನ್ ವ್ಯವಸ್ಥೆಯ ಬಗ್ಗೆಯೂ ಹೆಚ್ಚಿನ ಒತ್ತು ಕೊಡಬೇಕಾಗಿದೆ ಮತ್ತು ಕ್ವಾರಂಟೈನ್ ವ್ಯವಸ್ಥೆಯು ಜಾಸ್ತಿ ಮಾಡಬೇಕಾದುದರಿಂದ ಸದ್ಯದ ಮಟ್ಟಿಗೆ ನೆರೆ ರಾಜ್ಯದವರಿಗೆ pass ವಿತರಣೆಯನ್ನು ನಿಲ್ಲಿಸಲಾಗಿದೆ ಮತ್ತು ಪ್ರಸ್ತುತ 5250 ಕ್ಕೂ ಅಧಿಕ ಜನ ಕ್ವಾರಂಟೈನಲ್ಲಿರುವುದಾಗಿ ಹೇಳಿದರು.

ಒಟ್ಟಾರೆ ಇಂದಿನ ಚರ್ಚೆಯು ಫಲಪ್ರದವಾಗಿದ್ದು ಗಲ್ಫ್ ನ ಕನ್ನಡಿಗರು ಉತ್ತಮ ಫಲಿತಾಂಶದ ನೀರಿಕ್ಷೆಯಲ್ಲಿದ್ದಾರೆ.